== ವೃತ್ತಿ ಜೀವನ == ಭಾವನಾ ರಾವ್ ಭಾರತೀಯ ಚಲನಚಿತ್ರ ನಟಿ. ಗಾಳಿಪಟ ಚಲನಚಿತ್ರದ ಮೂಲಕ ೨೦೦೮ರಲ್ಲಿ ಇವರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕೋಲಾ ಕೊಲಯ ಮುಂಧರಿಕಾ ಮತ್ತು ವಿನ್‌ಮೀಂಗಲ್‌ಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅವರು ಜನಮನ್ನಣೆಯನ್ನು ಗಳಿಸಿದರು. ಅವರು ಭರತನಾಟ್ಯ ನರ್ತಕಿ ಮತ್ತು ಪ್ರಮುಖ ಚಲನಚಿತ್ರ ನಟಿಯಾಗುವ ಮೊದಲು ವಿವಿಧ ದೂರದರ್ಶನ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿದ್ದಾರೆ . ಭಾವನಾ ರಾವ್ ಅವರು ಕನ್ನಡ ಚಿತ್ರಗಳಲ್ಲದೇ ತಮಿಳು ಚಲನಚಿತ್ರಗಳಾದ "ವಿನ್ಮೀಂಗಲ್"(೨೦೧೨), "ಮನಯುದ್ಧಮ್"(೨೦೧೩) ಗಳಲ್ಲಿ ನಟಿಸಿದ್ದಾರೆ. ಇವರು "ಅಟ್ಟಹಾಸ"(೨೦೧೩), ಮಹಾ ಭಕ್ತ ಸಿರಿಯಾಲ (೨೦೧೪), ಪರಪಂಚ (೨೦೧೬), ಸತ್ಯಹರಿಶ್ಚಂದ್ರ (೨೦೧೭) ಮತ್ತು "ದಯವಿಟ್ಟು ಗಮನಿಸಿ" (2017)ಗಳಲ್ಲಿ ನಟಿಸಿದ್ದಾರೆ. ೨೦೧೭ ರಲ್ಲಿ ಭಾವನಾ ಅವರು ಸತೀಶ್ ನೀನಾಸಂ ಮತ್ತು ರೋಶ್ನಿ ಪ್ರಕಾಶ್ ಜೊತೆಯಲ್ಲಿ ನಿರ್ದೇಶಕ ರವಿ ಶ್ರೀವತ್ಸ ಅವರ "ಟೈಗರ್ ಗಲ್ಲಿ" ಚಿತ್ರದಲ್ಲಿ ನಟಿಸಿದ್ದರು. == ಭಾವನಾ ರಾವ್ ಮತ್ತು ಬಿಗ್ ಬಾಸ್-೫ == ಭಾವನಾ ರಾವ್ ಅವರು ೨೦೧೭ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುವ ಬಿಗ್ ಬಾಸ್ ರಿಯಾಲಿಟಿ ಶೋನ ಐದನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು == ಭಾವನಾ ರಾವ್ ಅವರ ಅಭಿನಯದ ಚಿತ್ರಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಭಾವನಾ ರಾವ್ ಐ ಎಮ್ ಡಿ ಬಿನಲ್ಲಿ